
ನಲ್ಲೆ, ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ....
ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ..
ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಳಿವೆ
ದುಃಖದ ಮಡು ಮಾತಿಲ್ಲದೆ ಮೌನ ತಾಳಿದೇ..
ಸಾಹಿತ್ಯ : ಲಕ್ಷ್ಮೀನಾರಾಯಣ ಭಟ್ಟ
No comments:
Post a Comment