Sunday, March 14, 2010

ನನ್ನ ಹುಡುಗಿ

ಎ‍ಂಥಾ ಚೆಲುವೆ ನನ್ನ ಹುಡುಗಿ
ಹೇಗೆ ಅದನು ಹೇಳಲಿ
ಮಾತಿನಾಚೆ ನಗುವ ಮಿಂಚ‌
ಹೇಗೆ ಹಿಡಿದು ತೋರಲಿ...
ಕಾಲಿಗೊಂದು ಗೆಜ್ಜೆ ಕಟ್ಟಿ
ಹೊರಟ ಹಾಗೆ ಪ್ರೀತಿ
ಝಲ್ಲೆನಿಸಿ ಎದೆಯನು
ಬೆರಗಿನಲ್ಲಿ ಕಣ್ಣನು
ಸೆರೆಹಾಕುವ ರೀತಿ...
ಬೆಳಕಿನೊಂದು ಸೀರೆಯುಟ್ಟು
ತೇಲಿ ನಡೆವ ವನಿತೆ
ಗರ್ಭ ಗ್ರುಹದಲ್ಲಿ
ದೇವರ ಬದಿಯಲ್ಲಿ
ಶಾಂತ ಉರಿವ ಹಣತೆ...
ಹೊಸರಾಗದ ಧ್ಯಾನದಲ್ಲಿ
ಹೆಡೆಯೇರಿದ ಕವಿತೆ
ಸ್ವರಗಳಲ್ಲಿ ಸುಳಿಯುವ‌
ಬಳುಕು ನಡೆಗೆ ಒಲಿಯುವ‌
ಮಧುರ ನಡೆಯ ವನಿತೆ...
ಸಾಹಿತ್ಯ :ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

Saturday, March 13, 2010

ನಾನೊಂದು ಭಾವ ಜೀವಿ ...............


ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ಋ‍ಣವು ಮಾತ್ರವೆ ನನ್ನದು

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು

ನನ್ನ ಮನದಲಿ ನೀನು ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯ ಮೋಹ ಶಕ್ತಿಯು
ನನ್ನ ಜೀನನ್ನ ಜೀವನ ಮುಕ್ತಿಯು

ಸಾಹಿತ್ಯ : ಕುವೆಂಪು


















I love Nature....


ನಲ್ಲೆ, ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ....

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ..

ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಳಿವೆ
ದುಃಖದ ಮಡು ಮಾತಿಲ್ಲದೆ ಮೌನ ತಾಳಿದೇ..
ಸಾಹಿತ್ಯ : ಲಕ್ಷ್ಮೀನಾರಾಯಣ ಭಟ್ಟ