ಎಂಥಾ ಚೆಲುವೆ ನನ್ನ ಹುಡುಗಿ
ಹೇಗೆ ಅದನು ಹೇಳಲಿ
ಮಾತಿನಾಚೆ ನಗುವ ಮಿಂಚ
ಹೇಗೆ ಹಿಡಿದು ತೋರಲಿ...
ಕಾಲಿಗೊಂದು ಗೆಜ್ಜೆ ಕಟ್ಟಿ
ಹೊರಟ ಹಾಗೆ ಪ್ರೀತಿ
ಝಲ್ಲೆನಿಸಿ ಎದೆಯನು
ಬೆರಗಿನಲ್ಲಿ ಕಣ್ಣನು
ಸೆರೆಹಾಕುವ ರೀತಿ...
ಬೆಳಕಿನೊಂದು ಸೀರೆಯುಟ್ಟು
ತೇಲಿ ನಡೆವ ವನಿತೆ
ಗರ್ಭ ಗ್ರುಹದಲ್ಲಿ
ದೇವರ ಬದಿಯಲ್ಲಿ
ಶಾಂತ ಉರಿವ ಹಣತೆ...
ಹೊಸರಾಗದ ಧ್ಯಾನದಲ್ಲಿ
ಹೆಡೆಯೇರಿದ ಕವಿತೆ
ಸ್ವರಗಳಲ್ಲಿ ಸುಳಿಯುವ
ಬಳುಕು ನಡೆಗೆ ಒಲಿಯುವ
ಮಧುರ ನಡೆಯ ವನಿತೆ...
ಸಾಹಿತ್ಯ :ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ



